5. ಅಸೈನ್ಮೆಂಟ್ : ಯ್ಯೂ ಟ್ಯೂಬ್ ಅಥವಾ ಅಂತರ್ಜಾಲದಲ್ಲಿ ವೀಕ್ಷಿಸಿದ ವಿವಿಧ ಶೈಕ್ಷಣಿಕ ಮಾಹಿತಿ

ಈ ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ಕಷ್ಟಗಳಿದ್ದರೂ  ಅದನ್ನು ನಮ್ಮ ಶಿಕ್ಷಕರು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡರು. ಮಾನ್ಯ ಅಪರ ಆಯುಕ್ತರು ಕಲಬುರಗಿ ಇವರ ಆದೇಶಾನುಸಾರ ಅವರು ನೀಡಿದ ಹತ್ತು ಅಸೈನ್ಮೆಂಟ್ ಗಳಲ್ಲಿ ಒಂದಾದ ಯ್ಯೂ ಟ್ಯೂಬ್ ಅಥವಾ ಅಂತರ್ಜಾಲದಲ್ಲಿ ಅನೇಕ ಶೈಕ್ಷಣಿಕ ವಿಡಿಯೋಗಳನ್ನು ನೋಡುವುದರ ಮೂಲಕ ನಮ್ಮ ವಿಷಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾದ  ವಿಡಿಯೋಗಳ ಮಾಹಿತಿಯನ್ನು ಬ್ಲಾಗ್ ನಲ್ಲಿ ಹಂಚಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾನು ನೋಡಿದ ೨೦ ವಿಡಿಯೋಗಳ ಟಿಪ್ಪಣಿಯನ್ನು ಇಲ್ಲಿಹಂಚಿಕೊಳ್ಳುತ್ತಿದ್ದೇನೆ.  

ದಿನಾಂಕ : ೧೮/೦೭/೨೦೨೦, ಶನಿವಾರ

೧. ನಲಿ ಕಲಿ ವೀರೇಶ್ ಅರಸೀಕೆರೆ 



ಈ ಮೇಲಿನ ಯ್ಯೂ ಟ್ಯೂಬ್ ಚಾನೆಲ್ ನಲ್ಲಿ ವೀರೇಶ್ ಅರಸೀಕೆರೆ ಎಂಬ ಶಿಕ್ಷಕರು  ತಾವೂ ಒಳಗೊಂಡಂತೆ ಅನೇಕ ಶಿಕ್ಷಕರು ನಲಿ ಕಲಿ ಬಗ್ಗೆ  ಸಾಕಷ್ಟು ಕಲಿಕೋಪಕರಣಗಳನ್ನು ಸುಲಭವಾಗಿ  ಸಿಗುವಂತಹ ವಸ್ತುಗಳನ್ನು ಬಳಸಿ  ತಯಾರಿಸುವ ಬಗೆಯನ್ನು ವಿವರಿಸಿದ್ದಾರೆ. ಈ ವಿಡಿಯೋದಿಂದಾಗಿ ನಾವೂ ನಮ್ಮ ನಲಿ ಕಲಿ ಕೋಣೆಗೆ  ಬೇಕಾದ ವಿವಿಧ ಕಲಿಕೋಪಕರಣಗಳನ್ನು ತಯಾರಿಸುವಲ್ಲಿ ಸಹಾಯಕವಾಯಿತು.


ದಿನಾಂಕ : ೧೯/೦೭/೨೦೨೦, ಭಾನುವಾರ 

. ನಲಿ ಕಲಿ ಆಕ್ಟಿವಿಟೀಸ್ ಗ್ರೂಪ್ 


ಈ ಗ್ರೂಪ್ ನ್ ಅನೇಕ ವಿಡಿಯೋಗಳನ್ನು ನಾನು ವೀಕ್ಷಿಸಿದ್ದೇನೆ. ಇದರಲ್ಲಿ ನಲಿ ಕಲಿ  ತರಗತಿ ಹೇಗಿರಬೇಕು, ಅಲ್ಲಿನ ಸಿದ್ಧತೆಗಳೇನು, ಯಾವೆಲ್ಲ ಸರಳ ಕಲಿಕೋಪಕರಣಗಳನ್ನು ತಯಾರಿಸಬಹುದು ಎಂಬುದನ್ನು ಶಿಕ್ಷಕರಾದ ಶ್ರೀ ಗುಜನಾಳಕರ್ ಅವರು ವಿವರಿಸಿದ್ದಾರೆ. ಇದು ನನಗೆ ಮುಂದೆ ಶಾಲೆ ಪ್ರಾರಂಭವಾದಾಗ ನನ್ನ ನಲಿ ಕಲಿ ತರಗತಿ ಕೋಣೆ  ಸಿದ್ಧ ಮಾಡಿಕೊಳ್ಳಲು ಅನೇಕ ಆಯಾಮಗಳನ್ನು ನೀಡಿತು.


ದಿನಾಂಕ : ೨೦/೦೭/೨೦೨೦, ಸೋಮವಾರ 

೩.  ತಾರೆ ಜಮೀನ್ ಪರ್ 


ಈ ಚಿತ್ರದಲ್ಲಿ ಡಿಸ್ಲೆಕ್ಸಿಯಾ ಎಂಬ ಕಲಿಕಾ ನ್ಯೂನತೆಯಿಂದ ಬಳಲುತ್ತಿರುವ ವಿದ್ಯಾರ್ಥಿಯೊಬ್ಬ ಕಲಿಕೆಯಲ್ಲಿ ಕಷ್ಟವನ್ನನುಭವಿಸುತ್ತಿರುತ್ತಾನೆ. ಅದನ್ನು ಗಮನಿಸದ ಅವನ ಪೋಷಕರು ಆ ಮುಗ್ಧ ಹುಡುಗನನ್ನು ದೂರದ ಹಾಸ್ಟೆಲ್ ಗೆ ಸೇರಿಸುತ್ತಾರೆ.  ಮನೆಯಿಂದ ದೂರವಾದ ಆತ ಖಿನ್ನತೆಗೊಳಗಾಗುತ್ತಾನೆ. ಅವನ ಕಲಿಕಾ ಕೊರತೆಯನ್ನು  ಯಾರೂ ಗಮನಿಸದೆ ಅವನೊಬ್ಬ ದಡ್ಡ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಆಗ ಅಲ್ಲಿನ ಚಿತ್ರ ಕಲಾ  ಶಿಕ್ಷಕನೊಬ್ಬ ಇವನ ಕಲಿಕಾ ಕೊರತೆಯನ್ನು ಗಮನಿಸುತ್ತಾನೆ. ತುಂಬಾ ಸುಂದರವಾಗಿ ಚಿತ್ರ ಬಿಡಿಸುವ ಆ ಹುಡುಗನ ಕಲೆ ಈ ಖಿನ್ನತೆಯಲ್ಲಿ ಮಾಸಿ ಹೋಗಿರುತ್ತದೆ. ಆ ಚಿತ್ರಕಲಾ ಶಿಕ್ಷಕ ಆ ಹುಡುಗನ ಪೋಷಕರೊಂದಿಗೆ ಸಮಾಲೋಚಿಸಿ ಅವನ ಸಮಸ್ಯೆಗಳ ಬಗ್ಗೆ  ಅವರಿಗೆ ಮನಮುಟ್ಟುವಂತೆ ವಿವರಿಸುತ್ತಾನೆ. ತನ್ನ ವಿಶಿಷ್ಟ ಬೋಧನಾ ವಿಧಾನಗಳಿಂದಾಗಿ ಆ ಹುಡುಗನ ಡಿಸ್ಲೆಕ್ಸಿಯಾ ಎಂಬ ಕಲಿಕಾ ನ್ಯೂನತೆಯನ್ನು  ನೀಗಿಸುತ್ತಾನೆ. ಇದರಿಂದ ನನಗೆ ವೈಯಕ್ತಿಕವಾಗಿ ಮನಗಂಡಿದ್ದೇನೆಂದರೆ ನಾವೂ ಸಹ ನಮ್ಮ ತರಗತಿಯಲ್ಲಿ ಇಂಥ ಮಕ್ಕಳನ್ನು  ಕಂಡಿರುತ್ತೇವೆ.ಆಗ ನಾವೂ ಸಹ ಇಂಥ ಮಕ್ಕಳಿಗೆ ಅವರ ಕಲಿಕಾ ನ್ಯೂನತೆಗಳನ್ನು ಗಮನಿಸಿ ಅವುಗಳಿಗೆ ಸೂಕ್ತ ಬೋಧನಾ ವಿಧಾನಗಳಿಂದ ಪರಿಹಾರ  ಕಂಡುಕೊಳ್ಳಬೇಕು.

ದಿನಾಂಕ : ೨೧/೦೭/೨೦೨೦, ಮಂಗಳವಾರ 

೪. ಜಾನಕಿ : ಕಿರು ಚಿತ್ರ 

ಕೊಪ್ಪಳದ ಶಿಕ್ಷಕರಾದ ಶ್ರೀ ಸುರೇಶ ಕಂಬಳಿ ಅವರ ಕಥೆಯನ್ನು ಅವಿನಾಶ್ ಚವ್ಹಾಣ್ ಎಂಬುವವರು ಚಿತ್ರ ರೂಪಕ್ಕೆ ನಿರ್ದೇಶಿಸಿ, ರೇಣುಕಾ ಕಂಬಳಿ ಎಂಬುವವರ ನಿರ್ಮಾಣದಲ್ಲಿ ತಯಾರಾದ ಕಿರುಚಿತ್ರವೇ  ಜಾನಕಿ.  ವಿದ್ಯಾರ್ಥಿನಿಯೊಬ್ಬಳು ತನ್ನ ಕುಡುಕ ತಂದೆ ಹಾಗೂ  ತನ್ನನ್ನು  ತುಂಬಾ  ಪ್ರೀತಿಸುವ ತಾಯಿಯ ಜೊತೆ ಮನೆಗೆಲಸ  ಮಾಡಿಕೊಂಡಿರುತ್ತಾಳೆ.ಇದನ್ನು  ಗಮನಿಸಿದ ಅವಳ ತರಗತಿ  ಶಿಕ್ಷಕರು ಜಾನಕಿಯನ್ನು ಶಾಲೆಗೆ ಕಳಿಸುವಂತೆ ಪೋಷಕರ ಮನವೊಲಿಸುತ್ತಾರೆ. ಆದರೆ ಅವಳ ಕುಡುಕ ತಂದೆ ಇದಕ್ಕೆ ನಿರಾಕರಿಸುತ್ತಾನೆ.  ಶಿಕ್ಷಕ  ಬಹಳಷ್ಟು ಸಲ ಅವರ ಮನವೊಲಿಸಲು  ಪ್ರಯತ್ನಿಸುತ್ತಾನೆ. ಮುಂದೊಂದು ದಿನ ಕುಡುಕ ತಂದೆ ಸಾವಿಗೀಡಾಗುತ್ತಾನೆ. 
ಇದರಿಂದ ಆ  ಕುಟುಂಬ ಮತ್ತಷ್ಟು ದೃತಿಗೆಡುತ್ತದೆ. ಆಗ ಆ ಶಿಕ್ಷಕರು ಮತ್ತೆ ಜಾನಕಿಯ ತಾಯಿಯ ಮನವೊಲಿಸಿದಾಗ ಆ ತಾಯಿ ಒಪ್ಪುತ್ತಲೇ. ತಾನು ಕೂಲಿ ನಾಲಿ ಮಾಡಿ ತನ್ನ ಮಗಳು ಶಾಲೆ ಕಲಿಯಬೇಕು ಎಂದು ನಿರ್ಧಾರ ಮಾಡುತ್ತಾಳೆ. ಜಾನಕಿ ಶಾಲೆಗೆ ಸೇರಿ ವಿದ್ಯೆಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತಾಳೆ . ಅವಳ ಜೊತೆ ಅವಳ ತಾಯಿಯನ್ನು ಶಾಲೆಯಲ್ಲಿ ಸನ್ಮಾನಿಸಿದಾಗ ತಾಯಿಯ ಕಣ್ಣುಗಳು ತುಂಬಿ ಬರುತ್ತವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಹಾಗೂ  ಶಾಲೆಯಿಂದ ಯಾವ ಮಕ್ಕಳೂ  ವಂಚಿತರಾಗಬಾರದು ಎಂಬುದನ್ನು ಈ ಚಿತ್ರ ಕಟ್ಟಿಕೊಡುತ್ತದೆ. 


ದಿನಾಂಕ : ೨೨/೦೭/೨೦೨೦, ಬುಧವಾರ 

೫.ಯುವರಾಜ ಮಾಧ  ಯ್ಯು ಟ್ಯೂಬ್ ಚಾನೆಲ್ :


ಈ  ಒಂದು ವಿಡಿಯೋದಲ್ಲಿ ಇಂಗ್ಲೀಷ ಗ್ರಾಮರ್ ಗೆ ಸಂಬಂಧಿಸಿದಂತೆ  ಟೆನ್ಸ್, ಟ್ರಿಕಿ ಸೆಂಟೆನ್ಸ್ಫ್ ಗಳ ಬಗ್ಗೆ ತಿಳಿದುಕೊಂಡೆನು. ಯುವರಾಜ್ ಮಾಧ ಅವ್ರು ಕನ್ನಡದ ಮೂಲಕ ಇಂಗ್ಲಿಷ್ ಕಲಿಸುತ್ತಿದ್ದಾರೆ. ಪ್ರಸೆಂಟ್ ಕಂಟಿನ್ಯೂವಸ್ ಟೆನ್ಸ್ ಬಗ್ಗೆ ಅನೇಕ ವಾಕ್ಯಗಳನ್ನು ಉದಾಹರಣೆಗಳ ಮೂಲಕ ಅವರು ಚೆನ್ನಾಗಿ ತಿಳಿಸಿ ಕೊಟ್ಟರು. 


ದಿನಾಂಕ : ೨೩/೦೭/೨೦೨೦, ಗುರುವಾರ 

೬. ಕಿಡ್ಸ್ ಪಿಡಿಯ ಯ್ಯು ಟ್ಯೂಬ್ ಚಾನೆಲ್ :

 
 ಇದೊಂದು ಅದ್ಭುತ ವಿಡಿಯೋ ಚಾನೆಲ್ ಆಗಿದ್ದು ಮಕ್ಕಳಿಗೆ ಇಂಗ್ಲಿಷ್ ಕಥೆಗಳನ್ನು ಸುಲಭವಾಗಿ ವಾಚನ ಮಾಡಲು ಸಹಾಯಕವಾಗಿದೆ. ಕಥೆಯನ್ನು ವಾಚನ ಮಾಡುವ ಶೈಲಿ, ಭಾರತೀಯ ಇಂಗ್ಲಿಷ್ ಉಚ್ಚಾರಣೆ ಹಾಗೂ ಮೌಲ್ಯಗನ್ನು ವಿಷಾದವಾಗಿ  ತಿಳಿಸುವ ಪರಿ  ಚೆನ್ನಾಗಿದೆ. ನಮ್ಮ ನಲಿ ಕಲಿ ವಿದ್ಯಾರ್ಥಿಗಳಿಗೂ ಇದೆ ತರಹ ನಾವು ಇಂಗ್ಲಿಷ್ ನಲ್ಲಿ ಕಥಾ ವಾಚನ ಮಾಡಬಹುದು ಎಂಬುದನ್ನು ತಿಳಿದುಕೊಂಡೆನು. 


ದಿನಾಂಕ್ : ೨೪/೦೭/೨೦೨೦, ಶುಕ್ರವಾರ 

೭. ಮಕ್ಕಳ್ ವಾಣಿ ಯ್ಯು ಟ್ಯೂಬ್ ಚಾನೆಲ್ 



ಇಲ್ಲಿ ಹಲವಾರು ವಿವಿಧ ರೀತಿಯ ವಿಡಿಯೋಗಳನ್ನು ವೀಕ್ಷಿಸಿದೆನು. ಇದೆ ಲಾಕ್ ಡೌನ್ ಸಮಯದಲ್ಲಿ ನಮ್ಮ ಇಲಾಖೆ ನಮ್ಮ ಮಕ್ಕಳಿಗಾಗಿ ಆರಂಭಿಸಿದ ಯ್ಯು ಟ್ಯೂಬ್ ಚಾನೆಲ್ ಇದು. ಇಲ್ಲಿ ಕಥಾವಾಚನ, ಮ್ಯಾಜಿಕ್, ಪ್ರಯೋಗಗಳು, ಮಕ್ಕಳೇ  ತಯಾರಿಸಿದ ವಿವಿಧ ಆಟಿಕೆಗಳು ಮುಂತಾದವುಗಳನ್ನು ವೀಕ್ಷಿಸಿದೆನು. ಇದರಿಂದ ಸರಳವಾಗಿ ನಾವು ನಮ್ಮ ಮಕ್ಕಳಿಗೆ ಯಾವೆಲ್ಲ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಬಹುದು ಎಂಬುದನ್ನು ತಿಳಿದುಕೊಂಡೆನು.


ದಿನಾಂಕ್ :೨೫/೦೭/೨೦೨೦, ಶನಿವಾರ 
೮. ಚಾಕ್ ಅಂಡ್ ಡಸ್ಟರ್ 


ಇದೊಂದು ಅದ್ಭುತ ಚಲನ ಚಿತ್ರವಾಗಿದ್ದು ಬಹಳ ಖುಷಿ ಕೊಟ್ಟಿತು. ಶಿಕ್ಷಕರು ಕಾಲ ಕಾಲಕ್ಕೆ ಯಾವ ರೀತಿ ತಮ್ಮ ವೃತ್ತಿಯಲ್ಲಿ ಅಪ್ ಡೇಟ್ ಆಗಿರಬೇಕು, ಒಂದು ವೇಳೆ ಅಪ್ ಡೇಟ್ ಆಗಿರದಿದ್ದರೆ ಸಮಾಜ ನಮ್ಮನ್ನು  ಯಾವೆಲ್ಲ ರೀತಿ ಕಾಣುತ್ತದೆ ಎಂಬುದನ್ನು ಈ ಒಂದು ಚಿತ್ರದಿಂದ ಕಲಿತುಕೊಂಡೆನು. ವಿದ್ಯಾರ್ಥಿಗಳು ನಿಜವಾಗಿ ಇಂತಹ ಶಿಕ್ಷಕರನ್ನು ಪ್ರೀತಿಸುತ್ತಾರೆ ಮತ್ತು ಶಿಕ್ಷಕರಾದವರು ಯಾವ ರೀತಿ ಅಧ್ಯಯನ ಮಾಡುತ್ತಾ ಇರಬೇಕು ಎಂಬುದನ್ನು ಈ ಚಿತ್ರ ಕಲಿಸಿತು.

ದಿನಾಂಕ್ : ೨೬/೦೭/೨೦೨೦, ಭಾನುವಾರ  

೯. ಎಜ್ಯೂಕೇರ್ ಮೀಡಿಯಾ ಪ್ಲಸ್ ಯ್ಯು ಟ್ಯೂಬ್ಫ್ ಚಾನೆಲ್ 

ಇದು ನನ್ನ ಪತಿ ಸಚಿನ್ ಕುಮಾರ್ ಅವರ ಯ್ಯು ಟ್ಯೂಬ್ಫ್ ಚಾನೆಲ್ ಆಗಿದ್ದು ಇಲ್ಲಿ ಶೈಕ್ಷಣಿಕ ವಿಡಿಯೊಗಳಿವೆ. ನಲಿ ಕಲಿ, ವಿಜ್ಞಾನ, ಈ- ಕಂಟೆಂಟ್ ಮುಂತಾದ ವಿಡಿಯೋಗಳನ್ನು ವೀಕ್ಷಿಸಿ ನನ್ನ ವೃತ್ತಿ ಪರತೆಯನ್ನು ಹೆಚ್ಚಿಸಿಕೊಂಡೆನು


ದಿನಾಂಕ್ : ೨೭/೦೭/೨೦೨೦, ಸೋಮವಾರ 
೧೦. ಸುಜ್ಞಾನ - ಸ್ವಯಂ 













ಇದೊಂದು ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯದಿಂದ ಆಯೋಜಿತವಾದ ವೆಬ್ ಸೈಟ್ ಆಗಿದ್ದು ಇಲ್ಲಿ ಸ್ವಯಂ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ವಿವಿಧ ಕೋರ್ಸ್ ಗಳಿವೆ.   ಇಲ್ಲಿನ ಕೆಲವು ಕೋರ್ಸ್ ಗಳಿಗೆ ನಾನು ಸೇರಬೇಕು ಎಂಬ ನಿಶ್ಚಯದೊಂದಿಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದೆನು. 


ದಿನಾಂಕ : ೨೮/೦೭/೨೦೨೦,  ಮಂಗಳವಾರ 
೧೧. ಅಭಯಾಸ್  ಮಾಂಟೆಸ್ಸೋರಿ 



It was really well presented. New method of puppet show was learnt using simple puppets and narration.


ದಿನಾಂಕ : ೨೮/೦೭/೨೦೨೦
 ೧೨.  ಗುರು ಪರಂ ಕಿರ್ಪಾ  ಯ್ಯು ಟ್ಯೂಬ್ ಚಾನೆಲ್ 


Learnt new method to prepare puppet theatre for kinds using card board box and waste clothes.



1 comment:

  1. Really you doing very appreciative work..mam keep doing better..best of luck..

    ReplyDelete