ವೃತ್ತಿ ನೈಪುಣ್ಯತೆ : ಕೊರೊನಾ ಕಲಿಸಿದ ಮೂರು ಪಾಠಗಳು

ಹುಶಃ ಇಂಥದ್ದೊಂದು ಕೆಟ್ಟ ಪರಿಸ್ಥಿತಿ ಬರುತ್ತದೆ ಎಂಬುದನ್ನು ನಾವ್ಯಾರೂ ಊಹಿಸಿರಲಿಲ್ಲ. ಚೀನಾ ದಲ್ಲಿ ಕೊರೊನಾ ಎಂಬ ವೈರಸ್ಸಿನಿಂದಾಗಿ ಜನರೆಲ್ಲಾ ಹುಳುಗಳ ರೀತಿಯಲ್ಲಿ ಸಾವನ್ನಪ್ಪುತ್ತಿದ್ದಾರೆ  ಎಂಬ ಸುದ್ದಿ ಕೇಳಿದಾಕ್ಷಣ ನಮ್ಮ ಮೈ ಜುಮ್ಮೆನ್ನುತ್ತಿತ್ತು. ನಮಗೂ  ಇಂಥ ಪರಿಸ್ಥಿತಿ ಬರಬಹುದೇ ಎಂತಂದು ನಮಗಗೆ ನಾವೇ ಪ್ರಶ್ನೆಗಳನ್ನು ಕೇಳಿಕೊಂಡಿದ್ದುಂಟು. ನಮ್ಮ ವೃತ್ತಿ ನಿರಂತರ ಅಧ್ಯಯನಶೀಲವಾದದ್ದು. ನಮ್ಮ ವಿದ್ಯಾರ್ಥಿಗಳನ್ನು ಹೀಗೆ ಕಲಿಕಾ ಚಕ್ರದಿಂದ ದೂರ ತಳ್ಳುತ್ತದೆ ಎಂದು ಭಾವಿಸಿರಲಿಲ್ಲ.  ಶಾಲೆಯಿಂದ ಸುಮಾರು ಮೂರು ತಿಂಗಳು ದೂರ ಉಳಿದು, ಏನು ಮಾಡಲಾಗದ ಸ್ಥಿತಿಯಲ್ಲಿ ಉಳಿದು ಸಾಕಷ್ಟು ನೋವು ವೇದನೆ ಕೂಡ ಅನುಭವಿಸಿದ್ದುಂಟು. ಆದರೆ ಈ ಲಾಕ್ ಡೌನ್ ಅವಧಿ ಅಥವಾ ಮನೆಯಿಂದಲೇ ಕೆಲಸ ಎನ್ನುವ ಪರಿಕಲ್ಪನೆ ಸಾಕಷ್ಟು ಪಾಠಗಳನ್ನು ಹೇಳಿಕೊಟ್ಟಿತು. ಅವುಗಳನ್ನು ಮುಂದೆ ಚರ್ಚಿಸಿದ್ದೇನೆ.

೧. ಅಧ್ಯಯನ ಶೀಲತೆ :
ಶಿಕ್ಷಕರಾದವರು ನಿರಂತರ ವಿದ್ಯಾರ್ಥ ಎಂಬುದು ಕಟು  ಸತ್ಯ. ಖಾಲಿ ಮನಸ್ಸು ದೆವ್ವಗಳ ಮನೆಯಿದ್ದಂತೆ ಎಂಬ ಆಂಗ್ಲ ಉಕ್ತಿಯಂತೆ ನಾವು ಈ ಅವಧಿಯಲ್ಲಿ ಖಾಲಿ ಕೂರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.  ಪ್ರತಿ ನಿತ್ಯ ಕೆಲಸಗಳ ನಂತರ ಅನೇಕ ಸಾಮಾಜಿಕ ಜಾಲತಾಣಗಳನ್ನು, ಯ್ಯು ಟ್ಯೂಬ್ ಗಳಲ್ಲಿನ ಅನೇಕ ವಿಡಿಯೋಗಳನ್ನು ನೋವುವುದ್ರ್ ಮೂಲಕ ನಮ್ಮ ವೃತ್ತಿಗೆ  ಬೇಕಾದ ಅನೇಕ ಕೌಶಲಗಳನ್ನು ಸಾಮರ್ಥ್ಯಗಳನ್ನು ತಿಳಿದುಕೊಳ್ಳುವಂತಾಯಿತು. ವಿವಿಧ ವಿಡಿಯೋಗಳು, ಶೈಕ್ಷಣಿಕ ಜಾಲತಾಣಗಲ್ಲಿನ ಮಾಹಿತಿಗಳು ನಮ್ಮನ್ನು ಮತ್ತಷ್ಟು ಅಧ್ಯಯನಶೀಲರನ್ನಾಗಿ ಮಾಡಲು ಕಾರಣವಾದವು. ಹೆಚ್ಚು ಹೆಚ್ಚು ಓದಿದಂತೆ ಕವಿಮೆ ದಡ್ಡರಾಗುತ್ತೇವೆ ಎನ್ನುವಂತೆ ಅನೇಕ ವಿಷಯಗಳಿಂದಾಗಿ ನನ್ನ ಅಧ್ಯಾಪನ ವೃತ್ತಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು. 

೨. ತೊಡಗಿಸಿಕೊಳ್ಳುವಿಕೆ :
  ಈ ಒಂದು ಅವಧಿಯಲ್ಲಿ ಸಾಕಷ್ಟು ವೆಬಿನಾರ್ ಗಳು, ಆನ್ಲೈನ್ ತರಬೇತಿಗಳು ಹಾಗೂ ಅನೇಕ ಸರಣಿ ಕಲಿಕಾ ತರಗತಿಗಳು ನಮ್ಮ ಒಂಟಿ ತನಕ್ಕೆ ನೆರವಾದವು. ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಲಾಗುತ್ತಿರುವ ಇಂಗ್ಲಿಷ್ ಸ್ಪೋಕನ್ ವೆಬಿನಾರ್ ಗಳು, ನಮ ಕಲಬುರಗಿ ವಿಭಾಗದಲ್ಲಿ ಆಯೋಜಿಸಲಾದ ೧-೩ ನಲಿ ಕಲಿ ಹಾಗೂ ಇಂಗ್ಲಿಷ್ ನಲಿ ಕಲಿ ವೆಬಿನಾರ್  ಗಳು ಪ್ರಾಥಮಿಕ ಹಂತದ ತರಗತಿಗಲ್ಲಿನ ಕಲಿಕಾ ವಿಧಾನಗಳ ಹಾಗೂ ಶಿಕ್ಷಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದವು. ೪-೫ ತರಗತಿಗೆ ಬೋಧಿಸುವ ಶಿಕ್ಷಕರ ತರಬೇತಿಗಳು, ರಾಜ್ಯದ ವಿವಿಧ ಮೂಲಗಳಿಂದ ಆಯೋಜಿಸಲಾದ ವಿವಿಧ ವೆಬಿನಾರ್ ಗಳಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದದ್ದು ನನ್ನ ಪಾಲಿನ ಭಾಗ್ಯವೇ ಸರಿ. ಇದರಿಂದ ಒಂದು  ಮಾಡಿಕೊಳ್ಳಲು  ಸಹಾಯಕವಾಯಿತು.ಬೇರೆ ಬೇರೆ ಶಿಕ್ಷಕರೊಂದಿಗಿನ ಸಂಮಾಲೋಚನೆಗಳು, ವಿವಿಧ ಸಂಪನ್ಮೂಲ ವ್ಯಕ್ತಿಗಳೊಂದಿಗಿನ ಮಾತು ಕತೆ ನಮ್ಮ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿದವು.

೩. ಹೊಸ ಹೊಸ ಹವ್ಯಾಸಗಳು :
ಹವ್ಯಾಸಗಳೆಂದರೆ ಬರಿ ಓದುವುದು, ಹಾಡು ಕೇಳುವುದು, ನೃತ್ಯ ಮಾಡುವುದು ಎಂದಷ್ಟೇ ಅಂದುಕೊಂಡಿದ್ದೇವು. ಆದರೆ  ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವಲ್ಲಿ ಈ ಅವಧಿ ಸಾಕಷ್ಟು ನೆರವಾಯಿತು. ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ಸ್ಫೋಒರ್ತಿದಾಯಕ ಪುಸ್ತಕಗಳನ್ನು ಓದುವಂತಾಯಿತು. ಎಸ್ಫ್. ಗಿರಿಧರ್ ಅವರು ಬರೆದಿರುವ ORDINARY PEOPLES, EXTRAORDINARY TEACHERS ಎಂಬ ಪುಸ್ತಕವನ್ನು ಓದಿದೆ. ಇದರಿಂದ ಒಬ್ಬ ಸಾಮಾನ್ಯ ಶಿಕ್ಷಕ ಯಾವ ರೀತಿ ತನ್ನ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬಲ್ಲ ಎಂಬುದನ್ನು  ತಿಳಿಯಲು ಸಾಧ್ಯವಾಯಿತು.  ಮಾನ್ಯ ಅಪರ ಆಯುಕ್ತರ ಸೂಚನೆಯಂತೆ ಬ್ಲಾಗ್ ತೆರೆಯುವುದು ಮತ್ತು ಅದರಲ್ಲಿ ವಿವಿಧ ಮಾಹಿತಿಯನ್ನು ಬರೆಯುವುದನ್ನು ತಿಳಿದುಕೊಂಡೆನು. ಇದರಿಂದ ಬ್ಲಾಗಿಂಗ್ ಒಂದು ಉತ್ತಮ ಹವ್ಯಾಸವಾಗಿ ಬೆಳೆಯಿತು. ಇದಲ್ಲದೆ ಇ - ಕಂಟೆಂಟಿಫ್ ಅನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡು ನನ್ನ ಸಹ ಆಡಿಯೋ ಮತ್ತು ವಿಡಿಯೋ ತಯಾರಿಸುವುದನ್ನು ಕಲಿತೆನು.

ಹೀಗೆ ಈ ಅವಧಿಯಲ್ಲಿ ಸಾಕಷು ರೀತಿಯಲ್ಲಿ ಅನೇಕ ಅಂಶಗಳನ್ನು ಅರಿತುಕೊಂಡು ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಯಿತು.



No comments:

Post a Comment