10. ಕೋವಿಡ್ ೧೯ : ಸಲಹೆ ಮತ್ತು ಕಾರ್ಯತಂತ್ರ

ಕೋವಿಡ್ ೧೯ ನಿಜವಾಗಲೂ  ಶೈಕ್ಷಣಿಕ ವ್ಯವಸ್ಥೆಗೆ ಬಹಳಷ್ಟು ಧಕ್ಕೆಯನ್ನುಂಟುಮಾಡಿದೆ . ಈ ನಡುವೆ ಅನೇಕ ಕಡೆಗಳಲ್ಲಿ ಶಿಕ್ಷಕರು ವಠಾರ ಶಾಲೆಯನ್ನು ಆರಂಭಿಸಿರುವುದು ಅಭಿನಂದನಾರ್ಹ. ಅಲ್ಲದೇನಮ್ಮಾ ಇಲಾಖೆಯು ಕೂಡ ವಿದ್ಯಾಗಮ ಎಂಬ ಕಾರ್ಯಕ್ರಮ ಪರಿಚಯಿಸುತ್ತಿದೆ. ಈ ಮೊದಲು ಶಾಲಾರಂಭದ ಬಗ್ಗೆ ಪೋಷಕರಿಂದ ಎಸ್ ಡಿ ಎಂ ಸಿ ಗಳಿಂದಲೂ ಅಭಿಪ್ರಾಯ ಸಂಗ್ರಹಿಸುವ ಮಾಹಿತಿ ಕೇಳಿತ್ತು. ಇದೆಲ್ಲರ ನಡುವೆ ನನಗೆ ಅನ್ನಿಸಿದ ಕೆಲವು ಸಲಹೆ ಹಾಗೂ ಕಾರ್ಯತಂತ್ರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.


ಸಲಹೆಗಳು ಮತ್ತು ಕಾರ್ಯತಂತ್ರಗಳು :

  1. ಈಗಾಗಲೇ ಆರಂಭಿಸಿದಂತೆ ವಠಾರ ಶಾಲೆಗಳನ್ನು  ಆರಂಭಿಸುವುದು.
  2. ಇಲಾಖೆಯ ವಿದ್ಯಾಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವುದು.
  3. ಮಕ್ಕಳ ಸಂಖ್ಯೆ ಕಡಿಮೆಯಿರುವ ಗ್ರಾಮೀಣ ಭಾಗದಲ್ಲಿನ  ಎಂದಿನಂತೆ ಶಾಲೆಗಳನ್ನು ಆರಂಭಿಸುವುದು. 
  4. ಹೆಚ್ಚಿನ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಇರುವ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ನಿಯೋಜನೆ ಮಾಡುವುದು.
  5. ಪಠ್ಯ ವಸ್ತುವಿನಲ್ಲಿ ಸಾಧ್ಯವಾದಷ್ಟು ಕಡಿತಗೊಳಿಸುವುದು.
  6. ಬೇರೆ ಬೇರೆ ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯುವುದು.
  7. ಆಸಕ್ತ ಸ್ವಯಂ  ಸೇವಕರನ್ನು ಪೋಷಕರನ್ನು ಬಳಸಿಕೊಳ್ಳುವುದು.
  8. ಆರೋಗ್ಯ ಇಲಾಖೆಯ ನೆರವನ್ನು ಪಡೆಯುವುದು.
  9. ಇದೊಂದು ಸವಾಲುಳ್ಳ ಕರ್ತವ್ಯವಾದುದರಿಂದ ಶಿಕ್ಷಕರ ಹಾಗು ವಿದ್ಯಾರ್ಥಿಗಳ ಸುರಕ್ಷತೆಯ ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳುವುದು.
  10. ಶಿಕ್ಷಣ  ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಎಲ್ಲವೂ ಸೇರಿ ಅಹರ್ನಿಶಿ ಸೇವೆ ಸಲ್ಲಿಸುವುದು.

ಕಾರ್ಯತಂತ್ರಗಳು :
ಶಿಕ್ಷಕರು : ಬೋಧನಾ ಚಟುವಟಿಕೆಗಳು  ಮತ್ತು ಜಾಗೃತಿ 
ಅಧಿಕಾರಿ ವೃಂದ : ಸೂಕ್ತ ಮಾರ್ಗದರ್ಶನ, ಮೇಲುಸ್ತುವಾರಿ 
ಆರೋಗ್ಯ ಇಲಾಖೆ : ಸೂಕ್ತ ರೀತಿಯಲ್ಲಿ ಮಾಸ್ಕ, ಸ್ಯಾನಿಟೈಸರ್ ವಿತರಣೆ ಮತ್ತು ಆರೋಗ್ಯ ಸಂಬಂಧಿತ ಮಾರ್ಗದರ್ಶನ 

No comments:

Post a Comment